Monday, May 2, 2011

ಗೆಳತಿ ನಾ ಮರೆತರೂ ಮರೆಯಲಾರೆ ನಿನ್ನ ..............

ಗೆಳತಿ ನಾ ಮರೆತರೂ ಮರೆಯಲಾರೆ ನಿನ್ನ
ನಾನರಿಯೆ ನೀ ಹೇಗೆ ಮರೆತೆಯೋ ನನ್ನ

ನೆನಪುಗಳಲ್ಲು ನೀನಿರುವೆ
ಕನಸುಗಳಲ್ಲು ನೀ ಬರುವೆ
ಅರಿತು ಅರಿಯದಂತೆಯೇ
ನನ್ನೊಳು ನೀ ಬೆರೆತುಹೋಗಿರುವಾಗ.
ನಿನ್ನನು ನಾ ಮರೆತು ಹೋಗಲೆಂತು??

ನೆನಪುಗಳು ಕನಸುಗಳಾಗಿ
ಕನಸುಗಳು ನೆನೆಪುಗಳಾಗಿ
ಕಣ್ಣೀರಿನಲಿ ಕರಗಿ ಹೋಗಿ
ಮನಸಿನೊಳು ಮರುಗಿ

ಮರೆತೆನೆಂದರೂ ಮರೆಯದ ನೆನಪು ನೀನು
ಬಿಟ್ಟೆನೆಂದರೂ ಬಿಡದ ಮಾಯೆಯು ನೀನು
ಇಂತಾದರು ನೀ ನನ್ನ ಮರೆತೇ ಹೋದೆಯೇನು
ಮುಂದೆ ಎಂದಾದರು ನೆನೆದುಕೊಳ್ಳುವೆಯೇನು??

4 comments:

ಪ್ರಮೋದ ಗುರುಬಸಪ್ಪ ಮುಧೋಳ said...

ಖಂಡಿತ ನೆನುಪು ಮಾಡಿಕೊಳ್ಳುತಾಳೆ ...ಸತೀಶವರೆ ..ಹನಿಗವನ ಚೆನ್ನಾಗಿದೆ .. :)

ಪ್ರವೀಣ್ ಭಟ್ said...

Chennagide Sateesh..

barita barita innu pakvavaguteeri..

dhanyavad
pravi

Basu said...

satish sakkattagide ri
nimma kavana

sukhada said...

tumba chenagide kavana. yaaru aaa gelati?