Monday, December 24, 2012

ನಾಕದ ನಾಕರ್ಥಗಳು



ನಾಕದ ನಾಕರ್ಥಗಳು ಹೀಗಿವೆ 

೧. ನಾಕ : ಸ್ವರ್ಗ .............

೨. ನಾಕ : ನಾನು ಕನ್ನಡಿಗ

೩.NAAKA :- Nannolage Adagiruva Aparimita Kalpanegala Anaavarana (ನನ್ನೊಳಗೆ ಅಡಗಿರುವ ಅಪರಿಮಿತ ಕಲ್ಪನೆಗಳ ಅನಾವರಣ)

೪.ನಾಕ : ನಾಲ್ಕು "ಕ "ಗಳು

1.ಕಥೆಗಳು
2.ಕಲ್ಪನೆಯ ಸಾಲುಗಳು
3.ಕವನಗಳು
4.ಕವಿತೆಗಳು

Friday, September 7, 2012

ಕತ್ತಲು ಹೊತ್ತು

ಹೊತ್ತು ಮೂಡುವ ಮುನ್ನ 
ಸತ್ತು ಹೋಗುವ ತವಕ
ಅದು ನನಗಲ್ಲ ಕತ್ತಲಿಗೆ

ಕತ್ತಲಾಗುವ ಮುನ್ನ 
ಮನೆಯ ಸೇರುವ ತವಕ 
ಅದು ಕೂಡ ನನಗಲ ರವಿಗೆ

*ಹೊತ್ತು =  ಸೂರ್ಯ 

Friday, August 24, 2012

ಬಾಳ ಮುಸ್ಸಂಜೆ (ಮುಪ್ಪು)

ದೂರ ತೀರದ ಯಾನದಲಿ 
ನಂಟುಗಳೆಲ್ಲ ಬಿಟ್ಟುಹೋಗಿ 
ತಿರುಗುತ್ತಿರುವೆ ಒಂಟಿಯಾಗಿ 

ಹಿಂದೊಮ್ಮೆ ನೂರು ಭಾಂದವ್ಯ
ಇಂದೊಂದೂ ಕಾಣಿಸದಾಗಿದೆ
ಮುಂದೊಮ್ಮೆ ಸಿಗುವುದೆನ್ನುವ
ಭರವಸೆಯು ನನ್ನೊಳಗಿಲ್ಲ

ದಡದ ಅಂಚಲಿ ಬರುವ ಅಲೆಗಳಂತೆ
ಬೇಡವೆಂದರೂ ಮೂಡುವ ನೆನಪುಗಳು
ಒಂದರಲ್ಲೂ ಸಿಹಿತನವಿಲ್ಲ ಎಲ್ಲವು ಕಹಿಯೇ

ಆಗೆಲ್ಲ ಸಾವಿಗೆ ಹೆದರುವ ಮನಸದು
ಈಗ ಅದನೆ ಬಯಸುವ ವಯಸಿದು
ಆದರೇನು ಎಲ್ಲವು ವಿಧಿಯ ಲೀಲೆ

ಬಾ ಮರಣವೇ ಬಂದೆನ್ನ ಅಪ್ಪು
ಬೇಸರವೆನಿಸಿಬಿಟ್ಟಿದೆ ಈ ಮುಪ್ಪು

ವೃದ್ಧಾಶ್ರಮದಲ್ಲಿ ಒಬ್ಬರ ಸ್ಥಿತಿ ಗಮನಿಸಿ ಅವರ ಮನಸ್ಥಿತಿ ಅರಿತು ಬರೆದದ್ದು ತಪ್ಪಿದ್ದರೆ ತಿದ್ದಿಕೊಂಡು ಓದಿಕೊಳ್ಳಬೇಕಾಗಿ ವಿನಂತಿ --- ಸತೀಶ್ ಬಿ ಕನ್ನಡಿಗ

Thursday, January 26, 2012

ಅಕ್ಕಿಯ ಬೆಳೆಯುದುವುದನು ಕಲಿತವನು ನಾಲ್ಕು ಜನರಿಗೆ ಅನ್ನದಾತನಾಗುತ್ತಾನೆ......
ಅಕ್ಷರವನು ಬರೆಯುವುದನು ಕಲಿತವನು ನಾಲ್ಕು ಜನರಿಗೆ ಶಿಕ್ಷಣದಾತನಾಗುತ್ತಾನೆ....
ಅನ್ನದಾತನಿಲ್ಲದೆ ಅಕ್ಷರದಾತನಿಗೆ ಬೆಲೆ ಇಲ್ಲ...ಅಕ್ಷರದಾತನಿಲ್ಲದೆ ಅನ್ನದಾತನಿಗೆ ಫಲವಿಲ್ಲ...SBK

Sunday, September 18, 2011

ಪ್ರೀತಿಯ ನಡುವೆ ಇರಬೇಕು ಅಭಿಮಾನ


ಪ್ರೀತಿಯ ನಡುವೆ ಇರಬೇಕು ಅಭಿಮಾನ 
ಪ್ರೇಮದ ಮಧ್ಯೆ ಬರಬಾರದು ಅನುಮಾನ 
ಅನುಮಾನದಿಂದಲೇ ಹುಟ್ಟುವುದು ಅವಮಾನ 
ಅವಮಾನದಿಂದ ಹದಗೆಡುವುದು ಜೀವಮಾನ 

ಬೇಡದ ವಿಷಯಗಳಲ್ಲಿ ಬಿಟ್ಟುಬಿಡಿ ಬಿಗುಮಾನ 
ಮೌನದೊಳಗೆ ಮಾಡಿಕೊಳ್ಳಿ ನಿಮ್ಮ ಸಂಧಾನ 
ಕೋಪದ ಸಮಯದಲ್ಲಿ ತೆಗೆದುಕೊಳ್ಳಿ ಸಮಾಧಾನ 
ಇದನು ಅರಿತರೆ ಬದುಕಿನ ಪಯಣ ಸುಖಮಯ ಗಾನ 
                                                                    ---  ಸತೀಶ್ ಬಿ ಕನ್ನಡಿಗ

Wednesday, September 7, 2011



ಬಳೆ ಬೇಕೇ ಬಳೆ 

ಬಳೆ ಬೇಕೇ ಬಳೆ
ಬಣ್ಣ ಬಣ್ಣದ ಬಳೆ 
ಬಿನ್ನಣದ ಮನ್ನಣೆಯ ಬಳೆ 
ಬಿಂಕದ ಬಂಗಾರದ ಬಳೆ 

ಘಲ್ ಘಲ್ ಎನ್ನುವ ಬಳೆ 
ಜಲ್ ಜಲ್ ಎನ್ನುವ ಬಳೆ 
ಜಲದಂತೆ ಜಳಗುಡುವ ಬಳೆ 
ಫಳ ಫಳನೇ ಹೊಳೆವ ಬಳೆ 

ಚಂದಗಾತಿಯ ಚಂದನದಂತ 
ಚಂದಾದ ಕೈಗೆ ತೊಡಿಸಿದಂತ ಬಳೆ
ಬಳೆ ಬೇಕೇ ಬಳೆ ಬಣ್ಣ ಬಣ್ಣದ ಬಳೆ 

ಚಲುವ ಚನ್ನಿಗನ ಸದ್ದಲ್ಲೇ ಸೆಳೆವಂತ ಬಳೆ
ಮನದ ಒಲವನ್ನು ಸಪ್ಪಳದಿ ತಳೆವಂತ ಬಳೆ 
ಬಳೆ ಬೇಕೇ ಬಳೆ ಬಣ್ಣ ಬಣ್ಣದ ಬಳೆ -------------------------ಸತೀಶ್ ಬಿ ಕನ್ನಡಿಗ


Friday, August 19, 2011

ಜೀವದೊಳಗಿನ ಭಾವವೆಲ್ಲವು ನೀನೇ......

ನನ್ನೊಳಗಿನ ಜೀವ ನಾನಾದರೂ
ಜೀವದೊಳಗಿನ ಭಾವ ನೀನಲ್ಲವೆ

ಕೊರಳ ಸ್ವರವು ನಾನಾದರೆ
ಆ ಸ್ವರದ ಧನಿಯೇ ನೀನಲ್ಲವೇ

ಕಡಲ ಅಲೆಯು ನಾನಾದರೆ
ಅಲೆ ಸೇರುವ ದಡವೇ ನೀನಲ್ಲವೇ

ಮನದ ಮಿಡಿತ ನನ್ನದಾದರೂ
ಹೃದಯದ ಬಡಿತವೆ ನಿನ್ನದಲ್ಲವೇ

ನೀನಿಲ್ಲದೆ ನಾನಿರುವ ಕ್ಷಣ
ಸೂರ್ಯನಿರದ ಮೂಡಣ...........