Tuesday, May 10, 2011

ಜೀವನ ಯಾನದ ಮುಸ್ಸಂಜೆಯಲಿ

ನಮ್ಮ ಪ್ರೀತಿಯ ಗೆಳೆಯ ಪ್ರವೀಣ್ ಭಟ್ ರವರು ಒಂದು ಚಿತ್ರದ ಬಗೆಗೆ ಒಂದು ಕವನ ಬರೆದಿದ್ದಾರೆ (http://nenapinasalu.blogspot.com/), ಆ ಒಂದು ಚಿತ್ರವನ್ನು ನೋಡಿದಾಗ ನನಗೆ ತೋಚಿದ ಹಾಗೆ ಒಂದು ಕವನ ಬರೆದ್ದಿದ್ದೇನೆ ಮನಸಿಗೆ ಸಿಕ್ಕ ಪದಗಳನ್ನು ಒಂದೆಡೆ ಸೇರಿಸಿ ನಿಮ್ಮ ಮುಂದಿಟ್ಟಿದ್ದೀನಿ ಹೇಗಿದೆ ಎಂದು ತಿಳಿಸಿ

(ಚಿತ್ರ ಕೃಪೆ : ಪ್ರವೀಣ್ ಭಟ್ -http://nenapinasalu.blogspot.com/)

ಎಂದೋ ಕಳೆದ ನಿನ್ನೆಯ ಮರೆಯುತ
ಎಂದೋ ಬರುವ ನಾಳೆಯ ನೆನೆಯುತ
ಸಾಗುತಿದೆ ಜೀವನವೆಂಬ ಪಯಣದ ರಥ

ಮನವು ಮಾಗಿಯುದು ದೇಹವು ಬಾಗಿಹುದು
ಮುಗವು ಬಾಡಿಹುದು ಮುಗ್ದತೆ ಮಾತ್ರವದು
ಎಂದಿನಂತೆ ಇಹುದು ದಗ್ಧ ಮನದ ಒಳಗೆ

ಅಂದು ಎಲ್ಲರು ನನ್ನವರೆ ನನ್ನೊಳಗೆ ಬಲವಿದ್ದಾಗ
ಇಂದು ಎಲ್ಲರು ಪರರೆ ನನ್ನಲಿ ಏನು ಇಲ್ಲವೀಗ
ನಾನಂದು ನಗುತಿದ್ದಾಗ ಜೊತೆಗಿದ್ದರು ನಾಲ್ಕಾರು ಜನ
ಇಂದು ನಾ ಅಳುತಿರುವಾಗ ಉಳಿದಿಹುದು ಬರಿ ಮೌನ

ಅಂದು ನೀಡುತ್ತಿದ್ದ ಕೈಗಳಿವು ಇಂದು ಬೇಡುತ್ತಿರುವಾಗ
ಅಂದು ಬೇಡುತ್ತಿದ್ದ ಕೈಗಳವು ಇಂದು ನಿಂತು ನೋಡುತ್ತಿವೆ

ಕಣ್ಣಂಚಿನಲ್ಲೊಂದು ಹನಿ ಕಣ್ಣೀರು
ಮನದಾಳದಲ್ಲೊಂದು ನಿಟ್ಟುಸಿರು
ಬಿಟ್ಟು ಬಿಡದೆ ಬರುತಿಹ ಭಾವವದು
ಕಟ್ಟ ಕಡೆಯವರೆಗಿರುವ ನೋವೆ ಇದು

ಕಾಯಿತ್ತಿರುವೆ ನಾನು ಆ ದಿನವ
ಸೊರಗುತ್ತಿರುವ ಈ ದೇಹವು
ಮಣ್ಣಲ್ಲಿ ಮಣ್ಣಾಗುವ ಆ ಕ್ಷಣವ.....


ಇಂತಹ ಒಂದು ಪ್ರಯತ್ನಕ್ಕೆ ನಾಂದಿ ಆದ ಪ್ರೀತಿಯ ಗೆಳೆಯ ಪ್ರವೀಣ್ ಭಟ್ ಅವರಿಗೆ ವಂದನೆಗಳು
--
ಸತೀಶ್ ಬಿ ಕನ್ನಡಿಗ

13 comments:

Unknown said...

ಮನವು ಮಾಗಿಯುದು ದೇಹವು ಬಾಗಿಹುದು
ಮುಗವು ಬಾಡಿಹುದು ಮುಗ್ದತೆ ಮಾತ್ರವದು
ಎಂದಿನಂತೆ ಇಹುದು ದಗ್ಧ ಮನದ ಒಳಗೆ

thumbha chennagi idhe satish
keep going
best of luck...!!! :)

Unknown said...

ಮನವು ಮಾಗಿಯುದು ದೇಹವು ಬಾಗಿಹುದು
ಮುಗವು ಬಾಡಿಹುದು ಮುಗ್ದತೆ ಮಾತ್ರವದು
ಎಂದಿನಂತೆ ಇಹುದು ದಗ್ಧ ಮನದ ಒಳಗೆ
thumbha chennagi bandidhe satish
keep going
best of luck....!!! :)

Unknown said...

dhanyavaadagalu josna

manjula said...

heart touching. sathish nim kavana nodi nan future hege irutheno ansidde.

Unknown said...

@manjula : hey yavattu haage andukolla baradu ene bandru navu face madtivi anno confidence irbeku aagale jeevana dalli tondare barolla..ee reetiyeella think madbedi

sukhada said...

tumba chenagide kanri.superb

Unknown said...

thumba channagide gelaya

ಪ್ರವೀಣ್ ಭಟ್ said...

Hi Sateesh...

katu satya.. bareda shaili atyuttama

ಅಂದು ಎಲ್ಲರು ನನ್ನವರೆ ನನ್ನೊಳಗೆ ಬಲವಿದ್ದಾಗ
ಇಂದು ಎಲ್ಲರು ಪರರೆ ನನ್ನಲಿ ಏನು ಇಲ್ಲವೀಗ
ನಾನಂದು ನಗುತಿದ್ದಾಗ ಜೊತೆಗಿದ್ದರು ನಾಲ್ಕಾರು ಜನ
ಇಂದು ನಾ ಅಳುತಿರುವಾಗ ಉಳಿದಿಹುದು ಬರಿ ಮೌನ

estu nija allava ee salugalu?

pravi

ನೆನಪಿನ ಅಲೆಗಳ ಜೊತೆ ನನ್ನ ಪಯಣ said...

ಅದ್ಭುತವಾಗಿದೆ.. ಸತೀಶ ಇಂದು ಬಾಳ ಮುಸಂಜೆಯಲ್ಲಿರುವ ಎಷ್ಟೋ ಜೀವಗಳ ಸತ್ಯ ಕಥನ..

PAGAL PRADEE said...

ತುಂಬಾ ಅದ್ಬುತವಾಗಿ ಹೇಳಿದಿರಿ ಸತೀಶ್

ಮಂಜಿನ ಹನಿ said...

ಮನದಲ್ಲಿನ ದುಗುಡ ದುಮ್ಮಾನಗಳಿಗೆ ಭೂಮಿಕೆಯಾಗಿದೆ ಕವಿತೆ.. ಮನಮುಟ್ಟುವಂತಹ ನಿರೂಪಣೆ ಮತ್ತು ಸೂಕ್ಮ ವಿಸ್ತು ವಿಸ್ತಾರ ಗಮನ ಸೆಳೆಯುತ್ತದೆ..
ಅಂದು ನೀಡುತ್ತಿದ್ದ ಕೈಗಳಿವು ಇಂದು ಬೇಡುತ್ತಿರುವಾಗ
ಅಂದು ಬೇಡುತ್ತಿದ್ದ ಕೈಗಳವು ಇಂದು ನಿಂತು ನೋಡುತ್ತಿವೆ
ಈ ಸಾಲುಗಳು ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ ಈ ಸಾಲುಗಳು.. ಕವಿತೆ ಸರಾಗವಾಗಿ ಓದಿಸಿಕೊಂಡಿದೆ ಮತ್ತು ಓದುಗರ ಮನಸ್ಸನ್ನು ವಾಸ್ತವಕ್ಕೆ ತೆರೆದಿಡುತ್ತದೆ ಕವಿತೆ..

ಮಂಜಿನ ಹನಿ said...
This comment has been removed by the author.
Sowmya K A said...

ಮನವು ಮಾಗಿಯುದು ದೇಹವು ಬಾಗಿಹುದು
ಮುಗವು ಬಾಡಿಹುದು ಮುಗ್ದತೆ ಮಾತ್ರವದು
ಎಂದಿನಂತೆ ಇಹುದು ದಗ್ಧ ಮನದ ಒಳಗೆ

chennagide sathish ji...