Tuesday, May 10, 2011

ಜೀವನ ಯಾನದ ಮುಸ್ಸಂಜೆಯಲಿ

ನಮ್ಮ ಪ್ರೀತಿಯ ಗೆಳೆಯ ಪ್ರವೀಣ್ ಭಟ್ ರವರು ಒಂದು ಚಿತ್ರದ ಬಗೆಗೆ ಒಂದು ಕವನ ಬರೆದಿದ್ದಾರೆ (http://nenapinasalu.blogspot.com/), ಆ ಒಂದು ಚಿತ್ರವನ್ನು ನೋಡಿದಾಗ ನನಗೆ ತೋಚಿದ ಹಾಗೆ ಒಂದು ಕವನ ಬರೆದ್ದಿದ್ದೇನೆ ಮನಸಿಗೆ ಸಿಕ್ಕ ಪದಗಳನ್ನು ಒಂದೆಡೆ ಸೇರಿಸಿ ನಿಮ್ಮ ಮುಂದಿಟ್ಟಿದ್ದೀನಿ ಹೇಗಿದೆ ಎಂದು ತಿಳಿಸಿ

(ಚಿತ್ರ ಕೃಪೆ : ಪ್ರವೀಣ್ ಭಟ್ -http://nenapinasalu.blogspot.com/)

ಎಂದೋ ಕಳೆದ ನಿನ್ನೆಯ ಮರೆಯುತ
ಎಂದೋ ಬರುವ ನಾಳೆಯ ನೆನೆಯುತ
ಸಾಗುತಿದೆ ಜೀವನವೆಂಬ ಪಯಣದ ರಥ

ಮನವು ಮಾಗಿಯುದು ದೇಹವು ಬಾಗಿಹುದು
ಮುಗವು ಬಾಡಿಹುದು ಮುಗ್ದತೆ ಮಾತ್ರವದು
ಎಂದಿನಂತೆ ಇಹುದು ದಗ್ಧ ಮನದ ಒಳಗೆ

ಅಂದು ಎಲ್ಲರು ನನ್ನವರೆ ನನ್ನೊಳಗೆ ಬಲವಿದ್ದಾಗ
ಇಂದು ಎಲ್ಲರು ಪರರೆ ನನ್ನಲಿ ಏನು ಇಲ್ಲವೀಗ
ನಾನಂದು ನಗುತಿದ್ದಾಗ ಜೊತೆಗಿದ್ದರು ನಾಲ್ಕಾರು ಜನ
ಇಂದು ನಾ ಅಳುತಿರುವಾಗ ಉಳಿದಿಹುದು ಬರಿ ಮೌನ

ಅಂದು ನೀಡುತ್ತಿದ್ದ ಕೈಗಳಿವು ಇಂದು ಬೇಡುತ್ತಿರುವಾಗ
ಅಂದು ಬೇಡುತ್ತಿದ್ದ ಕೈಗಳವು ಇಂದು ನಿಂತು ನೋಡುತ್ತಿವೆ

ಕಣ್ಣಂಚಿನಲ್ಲೊಂದು ಹನಿ ಕಣ್ಣೀರು
ಮನದಾಳದಲ್ಲೊಂದು ನಿಟ್ಟುಸಿರು
ಬಿಟ್ಟು ಬಿಡದೆ ಬರುತಿಹ ಭಾವವದು
ಕಟ್ಟ ಕಡೆಯವರೆಗಿರುವ ನೋವೆ ಇದು

ಕಾಯಿತ್ತಿರುವೆ ನಾನು ಆ ದಿನವ
ಸೊರಗುತ್ತಿರುವ ಈ ದೇಹವು
ಮಣ್ಣಲ್ಲಿ ಮಣ್ಣಾಗುವ ಆ ಕ್ಷಣವ.....


ಇಂತಹ ಒಂದು ಪ್ರಯತ್ನಕ್ಕೆ ನಾಂದಿ ಆದ ಪ್ರೀತಿಯ ಗೆಳೆಯ ಪ್ರವೀಣ್ ಭಟ್ ಅವರಿಗೆ ವಂದನೆಗಳು
--
ಸತೀಶ್ ಬಿ ಕನ್ನಡಿಗ

Monday, May 2, 2011

ಗೆಳತಿ ನಾ ಮರೆತರೂ ಮರೆಯಲಾರೆ ನಿನ್ನ ..............

ಗೆಳತಿ ನಾ ಮರೆತರೂ ಮರೆಯಲಾರೆ ನಿನ್ನ
ನಾನರಿಯೆ ನೀ ಹೇಗೆ ಮರೆತೆಯೋ ನನ್ನ

ನೆನಪುಗಳಲ್ಲು ನೀನಿರುವೆ
ಕನಸುಗಳಲ್ಲು ನೀ ಬರುವೆ
ಅರಿತು ಅರಿಯದಂತೆಯೇ
ನನ್ನೊಳು ನೀ ಬೆರೆತುಹೋಗಿರುವಾಗ.
ನಿನ್ನನು ನಾ ಮರೆತು ಹೋಗಲೆಂತು??

ನೆನಪುಗಳು ಕನಸುಗಳಾಗಿ
ಕನಸುಗಳು ನೆನೆಪುಗಳಾಗಿ
ಕಣ್ಣೀರಿನಲಿ ಕರಗಿ ಹೋಗಿ
ಮನಸಿನೊಳು ಮರುಗಿ

ಮರೆತೆನೆಂದರೂ ಮರೆಯದ ನೆನಪು ನೀನು
ಬಿಟ್ಟೆನೆಂದರೂ ಬಿಡದ ಮಾಯೆಯು ನೀನು
ಇಂತಾದರು ನೀ ನನ್ನ ಮರೆತೇ ಹೋದೆಯೇನು
ಮುಂದೆ ಎಂದಾದರು ನೆನೆದುಕೊಳ್ಳುವೆಯೇನು??