Friday, August 24, 2012

ಬಾಳ ಮುಸ್ಸಂಜೆ (ಮುಪ್ಪು)

ದೂರ ತೀರದ ಯಾನದಲಿ 
ನಂಟುಗಳೆಲ್ಲ ಬಿಟ್ಟುಹೋಗಿ 
ತಿರುಗುತ್ತಿರುವೆ ಒಂಟಿಯಾಗಿ 

ಹಿಂದೊಮ್ಮೆ ನೂರು ಭಾಂದವ್ಯ
ಇಂದೊಂದೂ ಕಾಣಿಸದಾಗಿದೆ
ಮುಂದೊಮ್ಮೆ ಸಿಗುವುದೆನ್ನುವ
ಭರವಸೆಯು ನನ್ನೊಳಗಿಲ್ಲ

ದಡದ ಅಂಚಲಿ ಬರುವ ಅಲೆಗಳಂತೆ
ಬೇಡವೆಂದರೂ ಮೂಡುವ ನೆನಪುಗಳು
ಒಂದರಲ್ಲೂ ಸಿಹಿತನವಿಲ್ಲ ಎಲ್ಲವು ಕಹಿಯೇ

ಆಗೆಲ್ಲ ಸಾವಿಗೆ ಹೆದರುವ ಮನಸದು
ಈಗ ಅದನೆ ಬಯಸುವ ವಯಸಿದು
ಆದರೇನು ಎಲ್ಲವು ವಿಧಿಯ ಲೀಲೆ

ಬಾ ಮರಣವೇ ಬಂದೆನ್ನ ಅಪ್ಪು
ಬೇಸರವೆನಿಸಿಬಿಟ್ಟಿದೆ ಈ ಮುಪ್ಪು

ವೃದ್ಧಾಶ್ರಮದಲ್ಲಿ ಒಬ್ಬರ ಸ್ಥಿತಿ ಗಮನಿಸಿ ಅವರ ಮನಸ್ಥಿತಿ ಅರಿತು ಬರೆದದ್ದು ತಪ್ಪಿದ್ದರೆ ತಿದ್ದಿಕೊಂಡು ಓದಿಕೊಳ್ಳಬೇಕಾಗಿ ವಿನಂತಿ --- ಸತೀಶ್ ಬಿ ಕನ್ನಡಿಗ

Thursday, January 26, 2012

ಅಕ್ಕಿಯ ಬೆಳೆಯುದುವುದನು ಕಲಿತವನು ನಾಲ್ಕು ಜನರಿಗೆ ಅನ್ನದಾತನಾಗುತ್ತಾನೆ......
ಅಕ್ಷರವನು ಬರೆಯುವುದನು ಕಲಿತವನು ನಾಲ್ಕು ಜನರಿಗೆ ಶಿಕ್ಷಣದಾತನಾಗುತ್ತಾನೆ....
ಅನ್ನದಾತನಿಲ್ಲದೆ ಅಕ್ಷರದಾತನಿಗೆ ಬೆಲೆ ಇಲ್ಲ...ಅಕ್ಷರದಾತನಿಲ್ಲದೆ ಅನ್ನದಾತನಿಗೆ ಫಲವಿಲ್ಲ...SBK

Sunday, September 18, 2011

ಪ್ರೀತಿಯ ನಡುವೆ ಇರಬೇಕು ಅಭಿಮಾನ


ಪ್ರೀತಿಯ ನಡುವೆ ಇರಬೇಕು ಅಭಿಮಾನ 
ಪ್ರೇಮದ ಮಧ್ಯೆ ಬರಬಾರದು ಅನುಮಾನ 
ಅನುಮಾನದಿಂದಲೇ ಹುಟ್ಟುವುದು ಅವಮಾನ 
ಅವಮಾನದಿಂದ ಹದಗೆಡುವುದು ಜೀವಮಾನ 

ಬೇಡದ ವಿಷಯಗಳಲ್ಲಿ ಬಿಟ್ಟುಬಿಡಿ ಬಿಗುಮಾನ 
ಮೌನದೊಳಗೆ ಮಾಡಿಕೊಳ್ಳಿ ನಿಮ್ಮ ಸಂಧಾನ 
ಕೋಪದ ಸಮಯದಲ್ಲಿ ತೆಗೆದುಕೊಳ್ಳಿ ಸಮಾಧಾನ 
ಇದನು ಅರಿತರೆ ಬದುಕಿನ ಪಯಣ ಸುಖಮಯ ಗಾನ 
                                                                    ---  ಸತೀಶ್ ಬಿ ಕನ್ನಡಿಗ

Wednesday, September 7, 2011



ಬಳೆ ಬೇಕೇ ಬಳೆ 

ಬಳೆ ಬೇಕೇ ಬಳೆ
ಬಣ್ಣ ಬಣ್ಣದ ಬಳೆ 
ಬಿನ್ನಣದ ಮನ್ನಣೆಯ ಬಳೆ 
ಬಿಂಕದ ಬಂಗಾರದ ಬಳೆ 

ಘಲ್ ಘಲ್ ಎನ್ನುವ ಬಳೆ 
ಜಲ್ ಜಲ್ ಎನ್ನುವ ಬಳೆ 
ಜಲದಂತೆ ಜಳಗುಡುವ ಬಳೆ 
ಫಳ ಫಳನೇ ಹೊಳೆವ ಬಳೆ 

ಚಂದಗಾತಿಯ ಚಂದನದಂತ 
ಚಂದಾದ ಕೈಗೆ ತೊಡಿಸಿದಂತ ಬಳೆ
ಬಳೆ ಬೇಕೇ ಬಳೆ ಬಣ್ಣ ಬಣ್ಣದ ಬಳೆ 

ಚಲುವ ಚನ್ನಿಗನ ಸದ್ದಲ್ಲೇ ಸೆಳೆವಂತ ಬಳೆ
ಮನದ ಒಲವನ್ನು ಸಪ್ಪಳದಿ ತಳೆವಂತ ಬಳೆ 
ಬಳೆ ಬೇಕೇ ಬಳೆ ಬಣ್ಣ ಬಣ್ಣದ ಬಳೆ -------------------------ಸತೀಶ್ ಬಿ ಕನ್ನಡಿಗ


Friday, August 19, 2011

ಜೀವದೊಳಗಿನ ಭಾವವೆಲ್ಲವು ನೀನೇ......

ನನ್ನೊಳಗಿನ ಜೀವ ನಾನಾದರೂ
ಜೀವದೊಳಗಿನ ಭಾವ ನೀನಲ್ಲವೆ

ಕೊರಳ ಸ್ವರವು ನಾನಾದರೆ
ಆ ಸ್ವರದ ಧನಿಯೇ ನೀನಲ್ಲವೇ

ಕಡಲ ಅಲೆಯು ನಾನಾದರೆ
ಅಲೆ ಸೇರುವ ದಡವೇ ನೀನಲ್ಲವೇ

ಮನದ ಮಿಡಿತ ನನ್ನದಾದರೂ
ಹೃದಯದ ಬಡಿತವೆ ನಿನ್ನದಲ್ಲವೇ

ನೀನಿಲ್ಲದೆ ನಾನಿರುವ ಕ್ಷಣ
ಸೂರ್ಯನಿರದ ಮೂಡಣ...........

Tuesday, July 12, 2011

ಕಲ್ಪನೆಗಳ ಕನವರಿಕೆಯಲ್ಲಿ ಮನಸಿಗೆ ತೋಚಿದ ಹಾಗೆ ಗೀಚಿದ ಎರಡು ಕವನಗಳು,

ಕಲ್ಪನೆಗಳ ಕನವರಿಕೆಯಲ್ಲಿ ಮನಸಿಗೆ ತೋಚಿದ ಹಾಗೆ ಗೀಚಿದ ಎರಡು ಕವನಗಳು..

ನೀ ಸನಿಹಕೆ ಬರ ಬಾರದೆ

ಅಂದು ನೀನಿದ್ದೆ ನೆರಳಿನಂತೆ ನನ್ನ ಹಿಂದೆ
ನಿನ್ನ ಬಾಳಿಗೆ ನಾ ಬೆಳಕಾಗಿ ಬರುವೆ ಎಂದೆ

ಹಗಲಿರುಳು ನನ್ನ ಸನಿಹದಲೇ ಸುಳಿದೆ
ಕಣ್ಣ ಕನಸುಗಳಲ್ಲೂ ಎಡ ಬಿಡದೆ ಕಾಡಿದೆ

ಇಂದು ನನನ್ನು ಕತ್ತಲಲಿ ಬಿಟ್ಟು ಹೋದೆ
ನೂರು ಭಾವಗಳನು ಮೀಟಿ ಮರೆಯಾದೆ

ಹಗಲಿರುಳು ನಿನ್ನ ನೆನಪನ್ನೇ ನಾ ನೆನೆದೆ
ಒಮ್ಮೆಯಾದರು ನೀ ಸನಿಹಕೆ ಬರ ಬಾರದೆ?????????


ಮರೆತು ಬಿಡು ನನ್ನನ್ನು....

ಮರೆತು ಬಿಡು ನನ್ನನ್ನು....
ನೆನಯದಿರು ಇನ್ನೆಂದು....
ನೋಡಿದಿರು ಹಿಂದಿರುಗಿ ....
ಕಾಡದಿರು ಕನಸಲ್ಲೂ....
ನಿಲ್ಲದಿರು ಮನಸಲ್ಲೂ....
ಬಾರದಿರು ನೆನಪಲ್ಲೂ..

ನೀನಿಲ್ಲದೆ ಜಗವಿಲ್ಲ ಎಂದು ಅನಿಸಿತ್ತು ಅಂದು
ನಿನ್ನದಲ್ಲದ ಜಗವುಂಟು ಅಂತನಿಸಿದೆ ಇಂದು..