Friday, August 24, 2012

ಬಾಳ ಮುಸ್ಸಂಜೆ (ಮುಪ್ಪು)

ದೂರ ತೀರದ ಯಾನದಲಿ 
ನಂಟುಗಳೆಲ್ಲ ಬಿಟ್ಟುಹೋಗಿ 
ತಿರುಗುತ್ತಿರುವೆ ಒಂಟಿಯಾಗಿ 

ಹಿಂದೊಮ್ಮೆ ನೂರು ಭಾಂದವ್ಯ
ಇಂದೊಂದೂ ಕಾಣಿಸದಾಗಿದೆ
ಮುಂದೊಮ್ಮೆ ಸಿಗುವುದೆನ್ನುವ
ಭರವಸೆಯು ನನ್ನೊಳಗಿಲ್ಲ

ದಡದ ಅಂಚಲಿ ಬರುವ ಅಲೆಗಳಂತೆ
ಬೇಡವೆಂದರೂ ಮೂಡುವ ನೆನಪುಗಳು
ಒಂದರಲ್ಲೂ ಸಿಹಿತನವಿಲ್ಲ ಎಲ್ಲವು ಕಹಿಯೇ

ಆಗೆಲ್ಲ ಸಾವಿಗೆ ಹೆದರುವ ಮನಸದು
ಈಗ ಅದನೆ ಬಯಸುವ ವಯಸಿದು
ಆದರೇನು ಎಲ್ಲವು ವಿಧಿಯ ಲೀಲೆ

ಬಾ ಮರಣವೇ ಬಂದೆನ್ನ ಅಪ್ಪು
ಬೇಸರವೆನಿಸಿಬಿಟ್ಟಿದೆ ಈ ಮುಪ್ಪು

ವೃದ್ಧಾಶ್ರಮದಲ್ಲಿ ಒಬ್ಬರ ಸ್ಥಿತಿ ಗಮನಿಸಿ ಅವರ ಮನಸ್ಥಿತಿ ಅರಿತು ಬರೆದದ್ದು ತಪ್ಪಿದ್ದರೆ ತಿದ್ದಿಕೊಂಡು ಓದಿಕೊಳ್ಳಬೇಕಾಗಿ ವಿನಂತಿ --- ಸತೀಶ್ ಬಿ ಕನ್ನಡಿಗ

1 comment:

Badarinath Palavalli said...

ಈ ವೃದ್ಧಶ್ರಮಗಳಿಗೆ ಭೇಟಿ ಇತ್ತಾಗಲೆಲ್ಲ, ಯಾಕಪ್ಪಾ ಮಕ್ಕಳನ್ನು ಹೆತ್ತು ಹೊತ್ತು ಬೆವರು ಸುರಿಸಿ ಅವರನ್ನು ಓದಿಸಿ ದಡ ಸೇರಿಸಬೇಕು ಅನಿಸುತ್ತದೆ!

ಮನ ಮಿಡಿಯುವ ಕವನ.